ತೂಕ ಇಳಿಸಿಕೊಳ್ಳುವುದು ಕಷ್ಟದ ಕೆಲಸ. ಏಕೆಂದರೆ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುವುದೆಲ್ಲ ಎಲ್ಲರಿಗೂ ಸುಲಭವಲ್ಲ, ಆದರೆ ಒಂದು ವಿಶೇಷವಾದ ಪಾನೀಯದ ಸಹಾಯದಿಂದ, ಚಪ್ಪಟೆಯಾದ ಹೊಟ್ಟೆಯನ್ನು ಪಡೆಯಬಹುದು.
ತೂಕ ಹೆಚ್ಚಳ ಹೈ ಕೊಲೆಸ್ಟ್ರಾಲ್, ಮಧುಮೇಹ, ಹೈ ಬಿಪಿ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ, ದೇಹದ ಒಟ್ಟಾರೆ ಆಕಾರ ಹಾಳಾಗುತ್ತದೆ.
ನೈಸರ್ಗಿಕ ಪಾನೀಯವಾದ ಎಳನೀರನ್ನು ಕುಡಿಯುವ ಮೂಲಕ ಚಪ್ಪಟೆಯಾದ ಹೊಟ್ಟೆಯನ್ನು ಪಡೆಯಬಹುದು. ಆದರೆ ಇದಕ್ಕೆ ಎಳನೀರನ್ನು ಹೇಗೆ ಕುಡಿಯಬೇಕು? ಯಾವ ಹೊತ್ತಿನಲ್ಲಿ ಕುಡಿಯಬೇಕು ಎನುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಇದು ತೂಕ ಇಳಿಸುವಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ.
ಎಳನೀರಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ನೈಸರ್ಗಿಕ ಕಿಣ್ವಗಳು ಅಡಗಿರುತ್ತವೆ. ಇದರಿಂದಾಗಿ ದೇಹ ಹೈಡ್ರೆಡ್ ಆಗಿ ಇರುತ್ತದೆ. ಜೊತೆಗೆ ದಿನವಿಡೀ ಫ್ರೆಶ್ ನೆಸ್ ಇರುತ್ತದೆ.
ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕಡಿಮೆ ಕ್ಯಾಲೋರಿಗಳ ಜೊತೆಗೆ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿವೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಹೀಗಾಗಿ ನಿಯಮಿತವಾಗಿ ಎಳನೀರು ಕುಡಿಯುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟ ಸೇರಿದಂತೆ ದೇಹದಲ್ಲಿ ಸೇರಿಕೊಂಡಿರುವ ಅಧಿಕ ಕೊಬ್ಬು ಕರಗಲು ಆರಂಭವಾಗುತ್ತದೆ.
ಈ ನೈಸರ್ಗಿಕ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೆ ಬರೀ ಎಳನೀರಿನ ಬದಲು ಇದಕ್ಕೆ ಒಂದು ಚಮಚ ತುಳಸಿ ಬೀಜವನ್ನು ಬೆರೆಸಿ ಕುಡಿದರೆ ಬಹಳ ಬೇಗನೆ ತೂಕ ಕಡಿಮೆಯಾಗುತ್ತದೆ.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.